ಭಟ್ಕಳ:ಕರಿಕಲ್‌ನಲ್ಲಿ ನೇತಾಜಿ ಬೋಸ್ ಜನ್ಮದಿನಾಚರಣೆ
ಭಟ್ಕಳ, ಜನವರಿ 23:ನೇತಾಜಿ ಯುವಕ ಮಂಡಳಿ ಕರಿಕಲ್ (ರಿ) ಮಾವಿನ ಕುರ್ವೆ, ಭಟ್ಕಳ ಇದರ ಆಶ್ರಯದಲ್ಲಿ ಕರಿಕಲ್‌ನಲ್ಲಿ ನೇತಾಜಿ ಸುಭಾಷ್‌ಚಂದ್ರ ಬೋಸ್ ಜಯಂತಿಯನ್ನು ಆಚರಿಸಲಾಯಿತು.
ಎನ್‌ವಾಯ್‌ಕೆ ಕಾರವಾರ ಇದರ ಸೇವಾಕಾರ್ಯಕರ್ತ ಕುಮಾರ ರಾಮಕೃಷ್ಣ ಮೊಗೇರ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಂಜನಾ ಡಾನ್ಸ ಅಕಾಡೆಮಿ (ರಿ) ಕರಿಕಲ್, ಭಟ್ಕಳ ಇದರ ಕಾರ್ಯನಿರ್ವಾಹಕ ನಾಗರಾಜ ಮೊಗೇರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ನೇತಾಜಿ ಯುವಕ ಮಂಡಳಿಯ ಕಾರ್ಯದರ್ಶಿ ಬಾಬು ಗೋಯ್ದಪ್ಪ ಮೊಗೇರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜನಾರ್ಧನ ಸಂಕಯ್ಯ ಮೊಗೇರ ಎಲ್ಲರನ್ನೂ ಸ್ವಾಗತಿಸಿದರು. ಶೇಖರ ಗೋವಿಂದ ಮೊಗೇರ ಕಾರ್ಯಕ್ರಮ ನಿರ್ವಹಣೆ ಮಾಡಿದರು.
Rate this article



del.icio.us
Digg
Comments (0 posted):
Post your comment