Home | ರಾಜ್ಯ ವಾರ್ತೆ | ಬೆಂಗಳೂರು | ಬೆಂಗಳೂರು: ಬಿಬಿಎಂಪಿ ಚುನಾವಣೆ ರಾಜ್ಯ ಸರ್ಕಾರದ ಕ್ರಮಕ್ಕೆ ಉಚ್ಛ ನ್ಯಾಯಾಲಯದ ಪ್ರಶ್ನೆ

ಬೆಂಗಳೂರು: ಬಿಬಿಎಂಪಿ ಚುನಾವಣೆ ರಾಜ್ಯ ಸರ್ಕಾರದ ಕ್ರಮಕ್ಕೆ ಉಚ್ಛ ನ್ಯಾಯಾಲಯದ ಪ್ರಶ್ನೆ

Font size: Decrease font Enlarge font
image

ಚುನಾವಣೆಗೆ ಮೋಕ್ಷ ಸಿಗುವ ಬಗ್ಗೆ ಪೀಠಕ್ಕೆ ಅನುಮಾನ!

ಬೆಂಗಳೂರು, ಫೆಬ್ರವರಿ ೮ : ಬೆಂಗಳೂರು ಮಹಾನಗರ ಪಾಲಿಕೆ ಚುಣಾವಣೆಗೆ ಸಂಬಂದಿಸಿದಂತೆ ಸುಪ್ರಿಂಕೋರ್ಟನ ಆದೇಶದಂತೆ ನ್ಯಾಯಲಯಕ್ಕೆ ಅರ್ಜಿ ಸಲ್ಲಿಸದ ರಾಜ್ಯ ಸರ್ಕಾರದ ಕ್ರಮವನ್ನ ತರಾಟೆಗೆ ತೆಗೆದುಕೊಂಡಿರುವ ರಾಜ್ಯ ಉಚ್ಚ ನ್ಯಾಯಲಯ, ಅರ್ಜಿ ಸಲ್ಲಿಸಲು ಒಂದು ದಿನದ ಗಡುವು ನೀಡಿದೆ.

 

 

ಚುನಾವಣೆ ನಡೆಸಲು ಸಮಯಾವಕಾಶ ಬೇಕಿದ್ದರೆ ಹೈಕೊರ್ಟಿಗೆ ಅರ್ಜಿ ಸಲ್ಲಿಸದೆ ವಿಳಂಬ ಮಾಡಿದ್ದು ಸರಿ ಅಲ್ಲ ಎಂದು ನ್ಯಾಯಮೂರ್ತಿ ಮಂಜುಳಾ ಚೆಲ್ಲೂರ್ ಹಾಗು ನ್ಯಾಯಮೂರ್ತಿ ಅಬ್ದುಲ್ ನಜೀರ್ ಅವರನ್ನ ಒಳಗೊ೦ಡ ವಿಭಾಗೀಯ ಪೀಠ ಕಿಡಿಕಾರಿತು.

 

 

ಬಿಬಿ‌ಎಂಪಿ ಚುನಾವಣೆಗೆ ಸಂಬಂದಿಸಿದಂತೆ ರಾಜ್ಯ ಸರ್ಕಾರದ ನಿಲುವನ್ನ ಗಮನಿಸಿದರೆ ಈ ಚುನಾವಣೆಗೆ ಮೋಕ್ಷ ಸಿಗುವ ಅನುಮಾನವನ್ನ ಪೀಠ ವ್ಯಕ್ತಪಡಿಸಿತು.

 

ಚುನಾವಣಾ ವೇಳಾಪಟ್ಟಿ ಮುಂದುಡಲು ಮೌಖಿಕ ಆದೇಶ ಸಾಕಾಗುತ್ತೆ ನ್ಯಾಯಲಯಕ್ಕೆ ಅರ್ಜಿ ಹಾಕಲು ನೋಟಿಸ್ ನೀಡಬೇಕೆ ಇನ್ನು ಮುಂದೆ ಇದಕ್ಕೆ ಅವಕಾಶವಿಲ್ಲ ಬೇಗ ಅರ್ಜಿ ಹಾಕಿ ಎಂದು ಪೀಠ ಸೂಚಿಸಿತು.

 

 

ನ್ಯಾಯಲಯದ ಆದೇಶದ ಪ್ರತಿ ಸಿಗದ ಕಾರಣ ಅರ್ಜಿ ಸಲಿಸಲು ವಿಳಂಬವಾಯಿತು ಎನ್ನುವ ಸರ್ಕಾರಿ ವಕೀಲರ ವಾದವನ್ನು ಒಪ್ಪದ ನ್ಯಾಯಪೀಠ ವಿಷಯದ ಗಂಬೀರತೆಯ ಅರಿತು ಈ ರೀಯಿ ಕರ್ತವ್ಯಲೋಪ ಎಸಗಿರುವುದು ಸರಿ ಅಲ್ಲ ಎಂದಿತು.

 

 

ಇಂದು ಸಂಜೆ ಒಳಗೆ ಅರ್ಜಿ ಸಲ್ಲಿಸುವುದಾಗಿ ಸರ್ಕಾರಿ ವಕೀಲರು ಹೇಳಿದಾಗ ಪೀಠ ನಾಳೆಗೆ ವಿಚಾರಣೆಯನ್ನ ಮುಂದೂಡಿತು. 

 

Comments (0 posted):

Post your comment comment

Please enter the code you see in the image:

  • email Email to a friend
  • print Print version
  • Plain text Plain text
Rate this article
0
Powered by SahilOnline.org