ಮುಂಬೈ: ಲಂಕಾ ವಿರುದ್ಧ ಟೀಂ ಇಂಡಿಯಾಗೆ ಸರಣಿ ಜಯ; ಟೆಸ್ಟ್ ಶ್ರೇಯಾಂಕದಲ್ಲಿ ಭಾರತಕ್ಕೆ ಅಗ್ರಸ್ಥಾನ
ಮುಂಬೈ, ಭಾನುವಾರ, 6 ಡಿಸೆಂಬರ್: ಜಹೀರ್‌ಖಾನ್ ಅವರ ಭರ್ಜರಿ ಬೌಲಿಂಗ್ ಪ್ರದರ್ಶನದಿಂದಾಗಿ ಭಾರತ ಅಂತಿಮ ಟೆಸ್ಟ್‌ನಲ್ಲಿ ಶ್ರೀಲಂಕಾ ವಿರುದ್ಧ ಇನ್ನಿಂಗ್ಸ್ ಹಾಗೂ 24 ರನ್‌ಗಳ ಜಯಸಾಧಿಸಿ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೆ ತಲುಪಿದೆ.
ಭಾರತ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಸತತ ನಾಲ್ಕು ಟೆಸ್ಟ್ ಪಂದ್ಯಗಳಲ್ಲಿ ಗೆಲುವು ಪಡೆದು ಮಾಜಿ ನಾಯಕ ಅಜರುದ್ದಿನ್ ದಾಖಲೆಯನ್ನು ಸರಿಗಟ್ಟಿದ್ದಾರೆ.ಏತನ್ಮಧ್ಯೆ ಭಾರತ ವಿರುದ್ಧ ಟೆಸ್ಟ್ ಗೆಲ್ಲಬೇಕೆನ್ನುವ ಲಂಕಾ ತಂಡದ ನಾಯಕ ಕುಮಾಲ ಸಂಗಕ್ಕರ ಅವರ ಕನಸು ಛಿದ್ರವಾಗಿದೆ.
ಇದಕ್ಕಿಂತ ಮೊದಲು ಶ್ರೀಲಂಕಾ 6 ವಿಕೆಟ್‌ಗಳ ನಷ್ಟಕ್ಕೆ 274 ರನ್‌ಗಳೊಂದಿಗೆ ಆಟವನ್ನು ಆರಂಭಿಸಿತು.ಲಂಕಾದ ಆರಂಭ ಉತ್ತಮವಾಗಿರಲಿಲ್ಲ. ತಂಡದ ನಾಯಕ ಶತಕವೀರ ಕುಮಾರ ಸಂಗಕ್ಕರ(137) ಮೊದಲ ಓವರ್‌ನಲ್ಲಿ ಜಹೀರ್‌ಖಾನ್‌ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್‌ಗೆ ಮರಳಿದರು.
ನಂತರ ಬಂದ ರಂಗನಾ ಹೆರಾತ್ (3) ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲು ಸಾಧ್ಯವಾಗದೆ ಜಹೀರ್‌ಖಾನ್ ಬೌಲಿಂಗ್‌ನಲ್ಲಿ ಹರಭಜನ್ ಅವರಿಗೆ ಕ್ಯಾಚ್ ನೀಡಿ ಔಟಾದರು.
ನುವಾನ್ ಕುಲಶೇಖರ 19 ರನ್‌ಗಳಿಸಿ ಜಹೀರ್‌ಗೆ ತಮ್ಮ ವಿಕೆಟ್ ಒಪ್ಪಿಸಿದರು. ಹರಭಜನ್ ಬೌಲಿಂಗ್‌ನಲ್ಲಿ ಮುತ್ತಯ್ಯ ಮುರಳೀಧರನ್ (13) ನಾಯಕ ಮಹೇಂದ್ರ ಸಿಂಗ್ ಧೋನಿ ಅವರಿಗೆ ಕ್ಯಾಚ್ ನೀಡಿ ಪೆವಿಲಿಯನ್‌ಗೆ ಮರಳಿದಾಗ ಕ್ರೀಡಾಂಗಣದಲ್ಲಿ ವಿಜಯೋತ್ಸವ ನಡೆಯಿತು.
ಸ್ಫೋಟಕ ಬ್ಯಾಟ್ಸ್‌ಮೆನ್ ವಿರೇಂದ್ರ ಸೆಹ್ವಾಗ್(293) ಪಂದ್ಯಶ್ರೇಷ್ಠ ಮತ್ತು ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಸೌಜನ್ಯ: ವೆಬ್ ದುನಿಯಾ
Rate this article



del.icio.us
Digg
Comments (0 posted):
Post your comment