ಕಾನ್ಪುರ ಟೆಸ್ಟ್: ಭಾರತಕ್ಕೆ ಭರ್ಜರಿ ಗೆಲುವು
ಇಲ್ಲಿನ ಗ್ರೀನ್‌ಪಾರ್ಕ್ ಕ್ರೀಡಾಂಗಣದಲ್ಲಿ ಮುಕ್ತಾಯಗೊಂಡ ಶ್ರೀಲಂಕಾ ವಿರುದ್ದದ ಎರಡನೆಯ ಟೆಸ್ಟ್ ಪಂದ್ಯವನ್ನು ಭಾರತ ಒಂದು ಇನ್ನಿಂಗ್ಸ್ ಮತ್ತು 144 ರನ್‌ಗಳ ಭಾರಿ ಅಂತರದಿಂದ ಗೆದ್ದುಕೊಂಡಿದೆ.
ಕಾನ್ಪುರ (ಪಿಟಿಐ): ಈ ಭರ್ಜರಿ ಗೆಲುವಿನೊಂದಿಗೆ ಭಾರತ ಟೆಸ್ಟ್ ಪಂದ್ಯಗಳಲ್ಲಿ 100ನೆಯ ಜಯವನ್ನು ದಾಖಲಿಸಿದ್ದು, 1-0 ರಲ್ಲಿ ಸರಣಿ ಮುನ್ನಡೆ ಪಡೆದುಕೊಂಡಿದೆ.
ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ಒಡ್ಡಿದ್ದ 642 ರನ್‌ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಿದ್ದ ಲಂಕನ್ನರು 229 ರನ್‌ಗಳಿಸಲಷ್ಟೇ ಶಕ್ತರಾಗಿದ್ದರು. ಎರಡನೆಯ ಇನ್ನಿಂಗ್ಸ್‌ನಲ್ಲಿ 269 ರನ್ ಕಲೆ ಹಾಕುವುದರೊಂದಿಗೆ ಲಂಕನ್ನರ ಹೋರಾಟ ಕೊನೆಗೊಂಡಿತು. ಇದರೊಂದಿಗೆ ಭಾರತ ಇನ್ನೂ ಒಂದೂವರೆ ದಿನದ ಆಟ ಬಾಕಿ ಉಳಿದಿರುವಾಗಲೇ ಪಂದ್ಯವನ್ನು ಗೆದ್ದುಕೊಂಡಿತು.
ಮೊದಲ ಇನ್ನಿಂಗ್ಸ್‌ನಲ್ಲಿ ಶ್ರೀಶಾಂತ್ ದಾಳಿಗೆ ತತ್ತರಿಸಿದ್ದ ಸಿಂಹಳೀಯರು, ಎರಡನೆಯ ಇನ್ನಿಂಗ್ಸ್‌ನಲ್ಲಿ ಹರಭಜನ್‌ಗೆ ತಲೆಬಾಗಿದರು. 98 ರನ್‌ಗಳಿಗೆ 3 ವಿಕೆಟ್ ಕೆಡವಿದ ಭಜ್ಜಿ ಶುಕ್ರವಾರದ ಹೀರೋ ಎನಿದರು.
ಗುರುವಾರ 4 ವಿಕೆಟ್ ಕಳೆದುಕೊಂಡು 57 ರನ್ ಗಳಿಸಿದ್ದ ಸಿಂಹಳೀಯರು ಶುಕ್ರವಾರ ಈ ಮೊತ್ತಕ್ಕೆ 134 ರನ್ ಸೇರಿಸುವಷ್ಟರಲ್ಲಿ 8 ವಿಕೆಟ್ ಕಳೆದಕೊಂಡರು. ಸಮರವೀರ 78, ಮರಳೀಧರನ್ 29 ರನ್‌ಗಳಿದ್ದ ಬಿಟ್ಟರೆ ಬೇರೆ ಯಾರೂ ಕ್ರೀಸಿನಲ್ಲಿ ಹೆಚ್ಚು ಹೊತ್ತು ನಿಲ್ಲುವ ಧೈರ್ಯ ಮಾಡಲಿಲ್ಲ.
ಮೊದಲ ಇನ್ನಿಂಗ್ಸ್ ನಲ್ಲಿ ಐದು ವಿಕೆಟ್ ಕಬಳಿಸಿ ಶ್ರೀಲಂಕಾದ ಸೋಲಿಗೆ ಮುನ್ನುಡಿ ಬರೆದಿದ್ದ ಶ್ರೀಶಾಂತ್ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.
ಸೌಜನ್ಯ: ಪ್ರಜಾವಾಣಿ
Rate this article



del.icio.us
Digg
Comments (0 posted):
Post your comment