ಲಾರ್ಡ್ಸ್: ಕಡೆಗೂ ಐತಿಹಾಸಿಕ ಗೆಲುವು ಸಾಧಿಸಿದ ಇಂಗ್ಲೆಂಡ್ - ಮಿಂಚಿದ ಫ್ಲಿಂಟಾಫ್
ಲಾರ್ಡ್ಸ್, ಜುಲೈ 20: ಇಂದಿನ್ಗೆ ಮುಕ್ತಾಯವಾದ ಆಶೆಸ್ ಸರಣಿಯ ದ್ವಿತೀಯ ಟೆಸ್ಟ್‌ನಲ್ಲಿ ಇಂಗ್ಲೆಂಡ್‌ನ ಆಲ್‌ರೌಂಡರ್ ಆಂಡ್ರ್ಯೂ ಪ್ಲಿಂಟಾಫ್ (92ಕ್ಕೆ 5) ತೋರಿದ ಚಮತ್ಕಾರಿ ಬೌಲಿಂಗ್ ಪ್ರದರ್ಶನದಿಂದಾಗಿ ಆಸೀಸ್ ವಿರುದ್ಧ ಇಂಗ್ಲೆಂಡ್ ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ 75 ವರ್ಷಗಳ ನಂತರ ಮನೋನ್ನತ ದಿಗ್ವಿಜಯ ಸಾಧಿಸಿತು.
ಸ್ಕೋರ್ ವಿವರ:
ಇಂಗ್ಲೆಂಡ್: 425 ಮತ್ತು 311/6 ಡಿಕ್ಲೇರ್
ಆಸ್ಟ್ರೇಲಿಯಾ: 215 ಮತ್ತು 406 ಕ್ಕೆ ಆಲೌಟ್
ಪಂದ್ಯಶ್ರೇಷ್ಠ: ಆಂಡ್ರ್ಯೂ ಫ್ಲಿಂಟಾಫ್
ಆದರೆ ಆಸ್ಟ್ರೇಲಿಯಾ ಪರ ದಿಟ್ಟ ಜತೆಯಾಟ ನೀಡಿದ ಮೈಕಲ್ ಕ್ಲಾರ್ಕ್ ಮತ್ತು ಬ್ರಾಡ್ ಹ್ಯಾಡಿನ್ ಅವರ ೬ನೇ ವಿಕೆಟ್ ಜತೆಯಾಟದ 183 ರನ್‌ಗಳ ಗಳಿಕೆ ಲಾರ್ಡ್ಸ್ ಮೈದಾನದಲ್ಲಿ ದಾಖಲೆಯಾಗಿ
ಉಳಿಯಿತು. ಮಧ್ಯಾಹ್ನದ ಭೋಜನ ವಿರಾಮಕ್ಕೆ ಇನ್ನೂ 17 ನಿಮಿಷಗಳು ಬಾಕಿ ಇರುವಾಗಲೇ ಇಂಗ್ಲೆಂಡ್ ಈ ಐತಿಹಾಸಿಕ ಜಯಮಾಲೆಯನ್ನು ಧರಿಸಿತು. ಪಂದ್ಯದ ನಾಲ್ಕನೇ ದಿನದವರೆಗೂ ಕುತೂಹಲವನ್ನು ಕಾಯ್ದುಕೊಂಡಿದ್ದ ಟೆಸ್ಟ್‌ಗೆ ಪ್ಲಿಂಟಾಫ್ ತನ್ನ ಶ್ರೇಷ್ಠ ಪ್ರದರ್ಶನದಿಂದ ಸೋಮವಾರ ಮಂಗಳ ಹಾಡಿದರಲ್ಲದೆ, ತನ್ನ ಟೆಸ್ಟ್ ನಿವೃತ್ತಿಯನ್ನು ಐತಿಹಾಸಿಕ ಕ್ಷಣವನ್ನಾಗಿಸುವಲ್ಲಿ ಅವರು ಯಶಸ್ವಿಯಾದ ನಿಮಿತ್ತ ಇಂಗ್ಲೆಂಡ್ 5 ಟೆಸ್ಟ್‌ಗಳ ಪೈಕಿ 1-0 ಮುನ್ನಡೆಯನ್ನು ಕಾಯ್ದುಕೊಂಡಿದೆ. ಇದಕ್ಕೂ ಮುನ್ನ ಪಂದ್ಯದ ನಾಲ್ಕನೇ ದಿನದ ಅಂತ್ಯಕ್ಕೆ ೫ ವಿಕೆಟ್ ಕಳೆದುಕೊಂಡು ೩೧೩ ರನ್ ಗಳಿಸಿದ್ದ ಆಸೀಸ್ ಇಂದು ಐತಿಹಾಸಿಕ ಟೆಸ್ಟ್ ಗೆಲುವಿನತ್ತಎಚ್ಚರಿಕೆಯ ಆಟವಾಡದೆ ಮುಗ್ಗರಿಸಿತು. ನಿನ್ನೆ ತಮ್ಮ ಉತ್ತಮ ಪ್ರದರ್ಶನದಿಂದ ತಂಡಕ್ಕೆಗೆಲುವಿನ ಆಸೆಯನ್ನು ತುಂಬಿದ್ದ ಮೈಕಲ್ ಕ್ಲಾರ್ಕ್ (136) ಮತ್ತು ಬ್ರಾಡ್ ಹ್ಯಾಡಿನ್ (80) ಅವರಿಗೆಪ್ಲಿಂಟಾಫ್ ಮತ್ತು ಸ್ವಾನ್ ದುಃಸ್ವಪ್ನವಾದರು.
ಈ ಇಬ್ಬರ ನಿರ್ಗಮನದೊಂದಿಗೆ ಇಂಗ್ಲೆಂಡ್ ತನ್ನ ಮಹೋನ್ನತ ಟೆಸ್ಟ್ ಗೆಲುವಿಗೆ ಹತ್ತಿರವಾಯಿತು. ಇವರ ನಂತರ ಬಂದ ಮಿಚೆಲ್ ಜಾನ್ಸನ್ (63) ಬ್ಯಾಟಿಂಗ್‌ನಲ್ಲಿಯೂ ತನ್ನ ಕರಾಮತ್ತು ಪ್ರದರ್ಶಿಸಿದರಾದರೂ, ಅವರ ಹೋರಾಟವು ನಿಸ್ಸಫಲವಾಯಿತು. ಹೀಗಾಗಿ ಆಸ್ಟ್ರೇಲಿಯಾ 107 ಓವರ್‌ಗಳಲ್ಲಿ 406 ರನ್‌ಗಳಿಗೆ ತನ್ನ ದ್ವಿತೀಯ ಇನಿಂಗ್ಸ್‌ಗೆ ಇತಿಶ್ರೀ ಹಾಡಿತಲ್ಲದೆ, ತನ್ನ ಸಾಂಪ್ರದಾಯಿಕ ಎದುರಾಳಿಯ ವಿರುದ್ಧ 115 ರನ್‌ಗಳ ಸೋಲುಂಡು ತಲೆತಗ್ಗಿಸಿತು.
Rate this article



del.icio.us
Digg
Comments (0 posted):
Post your comment