Home | ದ.ಕ.ಜಿಲ್ಲಾ ವಾರ್ತೆ | ಉಡುಪಿ | ಗಂಗೊಳ್ಳಿ: ಪಟ್ಟಣದಲ್ಲಿ ಬೃಹತ್ ಈದ್ ಮಿಲಾದ್ ಮೆರವಣಿಗೆ- ಮನಸೆಳೆದ ಸಾಂಪ್ರಾದಾಯಿಕ ದಫ್

ಗಂಗೊಳ್ಳಿ: ಪಟ್ಟಣದಲ್ಲಿ ಬೃಹತ್ ಈದ್ ಮಿಲಾದ್ ಮೆರವಣಿಗೆ- ಮನಸೆಳೆದ ಸಾಂಪ್ರಾದಾಯಿಕ ದಫ್

Font size: Decrease font Enlarge font

ಗಂಗೊಳ್ಳಿ, ಮಾರ್ಚ್ ೧: ಪ್ರವಾದಿ ಮೊಹಮ್ಮದ್ (ಸ) ರವರ ಜನ್ಮದಿನಾಚರಣೆಯ ಅಂಗವಾಗಿ ಗಂಗೊಳ್ಳಿಯಲ್ಲಿ ಬೃಹತ್ ಮೆರವಣಿಗೆಯೊಂದನ್ನು ಆಯೋಜಿಸಲಾಗಿತ್ತು. ಗಂಗೊಳ್ಳಿ ಜುಮಾ ಮಸೀದಿಯಿಂದ ಪ್ರಾರಂಭವಾದ ಮೆರವಣಿಗೆ ಮುಖ್ಯರಸ್ತೆಯಲ್ಲಿ ಸಾಗಿ ಬೀಚ್ ರಸ್ತೆಯ ಮೂಲಕ ಜಾಮಿಯಾ ಮೊಹಲ್ಲಾದ ಜಿ.ಎಸ್.ಕಾಂಪೌಂಡ್ ನಲ್ಲಿ ಸಮಾಪ್ತಿಗೊಂಡಿತು.

 

 

 

 

 

ಮೆರವಣಿಗೆಯಲ್ಲಿ ಕೋಟದ ರಿಫಾಯಿ ದಫ್ (ಸ್ಮಾಂಪ್ರಾದಾಯಿಕ ಚರ್ಮವಾದ್ಯ) ತಂಡ ಹಾಗೂ ಕೋಡಿಯ ದಫ್ ತಂಡ ಶಿರೂರಿಯ ದಾಯರೆ ತಂಡಗಳು ಭಾಗವಹಿಸಿ ವಿಶೇಷ ಕಳೆ ನೀಡಿದವು.

 

 

 

 

ಮೆರವಣಿಗೆಯುದ್ದಕ್ಕೂ ಪ್ರವಾದಿಯವರ ಸಂದೇಶ ಹಾಗೂ ನಾಅತ್ (ಧಾರ್ಮಿಕ ಗೀತೆಗಳು) ಕೇಳಿಬರುತ್ತಿತ್ತು. ಸೂಕ್ಷ್ಮ ಪ್ರದೇಶವಾದುದರಿಂದ ಡಿ.ವೈ.ಎಸ್.ಪಿ., ಸರ್ಕಲ್ ಇನ್ಸ್ ಪೆಕ್ಟರ್ ಸಹಿತ ಗಂಗೊಳ್ಳಿ ಹಾಗೂ ಅಮಾಸೆಬೈಲು ಠಾಣಾಧಿಕಾರಿ ಮತ್ತು ಸಿಬ್ಬಂದಿವರ್ಗ ಹಾಗೂ ಜಿಲ್ಲಾ ಮೀಸಲು ಪಡೆಯ ತುಕಡಿಯನ್ನು ಪಟ್ಟಣದಾದ್ಯಂತ ನಿಯೋಜಿಸಲಾಗಿತ್ತು.

 

ಮೆರವಣಿಗೆ ಶಾಂತರೀತಿಯಲ್ಲಿ ನಡೆದು ನೆರೆದವರ ಮನಸ್ಸಿಗೆ ಶಾಂತಿ ನೀಡಿತು.

 

 ಚಿತ್ರ, ವರದಿ: ಇಬ್ರಾಹಿಂ, ಗಂಗೊಳ್ಳಿ

Comments (0 posted):

Post your comment comment

Please enter the code you see in the image:

  • email Email to a friend
  • print Print version
  • Plain text Plain text
Rate this article
0
Powered by SahilOnline.org