ಕುಂದಾಪುರ:ರಿವಾಲ್ವರ್ ಸಹಿತ ಕಳವು ಆರೋಪಿಯ ಬಂಧನ
ಕುಂದಾಪುರ, ಫೆಬ್ರವರಿ 21: ಇಲ್ಲಿನ ಪೊಲೀಸರು ಸಾದ್ದಿಕ್ (28 ವರ್ಷ) ಬಿನ್ ಕೆ. ಮೊಹಮ್ಮದ್, ನಾಯಕ್ವಾಡಿ ಗಂಗೊಳ್ಳಿ ಎಂಬಾತನನ್ನು ಬಂಧಿಸಿ ಆತನಲ್ಲಿದ್ದ ಲೈಸೆನ್ಸ್‌ರಹಿತ ವೆಸ್ಟ್‌ಜರ್ಮನ್ ಮೇಡ್ ರಿವಾಲ್ವಾರ್ ಸಹಿತ ಮೂರೂ ಮೋಟಾರು ಸೈಕಲ್‌ಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ವಶಪಡಿಸಿಕೊಂಡ ಮೋಟಾರು ಸೈಕಲ್‌ಗಳ ಮತ್ತು ರಿವಾಲ್ವರ್‌ನ ಅಂದಾಜು ಮೌಲ್ಯ ರೂ ೨,೭೫,೦೦೦/- ಆಗಬಹುದಾಗಿದೆ. ಖಚಿತ ವರ್ತಮಾನದ ಮೇರೆಗೆ ಕುಂದಾಪುರ ತಾಲೂಕು ತಲ್ಲೂರು ರಾ.ಹೆ. ೧೭ರ ಹೇರಿಕುದ್ರು ಬ್ರಿಡ್ಜ್‌ನ ಹತ್ತಿರ ಸಾದ್ದಿಕ್‌ನನ್ನು ಪೊಲೀಸರು ಹಿಡಿದಿದ್ದರು. ಕಾರ್ಯಾಚಾರಣೆಯನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರವರ ನಿರ್ದೇಶನದಂತೆ ಹಾಗೂ ಕುಂದಾಪುರ ಉಪ ವಿಭಾಗದ ಡಿ.ವೈ,ಎಸ್.ಪಿ ಶ್ರೀ ವಿಶ್ವನಾಥ್ ಪಂಡಿತ್‌ರವರ ಹಾಗೂ ಕುಂದಾಪುರ ವೃತ್ತ ನಿರೀಕ್ಷಕರಾದ ಶ್ರೀ ಮದನ್ ಗಾಂವ್ಕರ್‌ರವರ ಮಾರ್ಗದರ್ಶನದಲ್ಲಿ ನಗರ ಠಾಣಾಧಿಕಾರಿ ಸತೀಶ್ ಕುಮಾರ್ ನಡೆಸಿದ್ದರು. ಕಾರ್ಯಚರಣೆಯಲ್ಲಿ ಸಿಬ್ಬಂದಿಗಳಾದ ಪ್ರಕಾಶ್, ವಿಜಯ್ ಕುಮಾರ್, ಗಣೇಶ್, ಮಹಾಬಲ, ಅಶೋಕ, ರಾಘವೇಂದ್ರ ಉಪ್ಪುಂದ, ವೆಂಕಟರಮಣ ಮತ್ತು ಚಾಲಕ ಸಲೀಂ ಉಲ್ಲಾರವರು ಪಾಲ್ಗೊಂಡಿರುತ್ತಾರೆ.
ವರದಿ: ಇಬ್ರಾಹಿಂ ಗಂಗೊಳ್ಳಿ
Rate this article



del.icio.us
Digg
Comments (0 posted):
Post your comment