Home | ದ.ಕ.ಜಿಲ್ಲಾ ವಾರ್ತೆ | ಉಡುಪಿ | ಹಿರಿಯಡ್ಕ:ಕಾರಾಗೃಹದಲ್ಲಿ ವಿಚಾರಣಾಧೀನ ಖೈದಿ ಆತ್ಮಹತ್ಯೆಗೆ ಪ್ರಯತ್ನ

ಹಿರಿಯಡ್ಕ:ಕಾರಾಗೃಹದಲ್ಲಿ ವಿಚಾರಣಾಧೀನ ಖೈದಿ ಆತ್ಮಹತ್ಯೆಗೆ ಪ್ರಯತ್ನ

Font size: Decrease font Enlarge font
ಹಿರಿಯಡ್ಕ, ಫೆಬ್ರವರಿ ೨೧ :ದಿನಾಂಕ ೧೯/೦೨/೨೦೧೦ ರ ಬೆಳಿಗ್ಗಿನ ಸಮಯ ಉಡುಪಿ ಜಿಲ್ಲಾ ಹಿರಿಯಡ್ಕ ಠಾಣಾ ಸರಹದ್ದಿನ ಅಂಜಾರು ಗ್ರಾಮದ ಕಾಜರಗುತ್ತುನಲ್ಲಿರುವ ಉಡುಪಿ ಜಿಲ್ಲಾ ಕಾರಾಗೃಹದಲ್ಲಿ ಉಡುಪಿ ನಗರ ಠಾಣೆಯ ಅಪರಾಧ ಕ್ರಮಾಂಕ ೩೭೨/೦೯ ನೇ ಪ್ರಕರಣದ ವಿಚಾರಣಾಧೀನ ಖೈದಿ ಮಂಜು ಯಾನೆ ಮಂಜುನಾಥ ಬಿನ್ ಲಕ್ಷ್ಮಣ, ಹನುಮಪುರ, ಹಾವೇರಿ ಜಿಲ್ಲೆ ಎಂಬವರು ಬ್ಯಾರಕ್ ನಂಬ್ರ ೧ ರಲ್ಲಿ ಬ್ಲೇಡಿನಿಂದ ತನ್ನ ಕುತ್ತಿಗೆಯನ್ನು ಕೊಯ್ದುಕೊಂಡು ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ದು, ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬುದಾಗಿ ಉಡುಪಿ ಜಿಲ್ಲಾ ಜೈಲ್ ಸುಪರಿಂಟೆಂಡೆಂಟ್ ಶ್ರೀ ಪಿ.ಎಸ್. ಅಂಬಿಕೆರ ರವರು ನೀಡಿದ ದೂರಿನಂತೆ ಹಿರಿಯಡ್ಕ ಠಾಣೆಯಲ್ಲಿ ಅಪರಾಧ ಕ್ರಮಾಂಕ ೧೩/೨೦೧೦ ಕಲಂ ೩೦೯ ಐ.ಪಿ.ಸಿ. ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 
ವರದಿ: ಇಬ್ರಾಹಿಂ, ಗಂಗೊಳ್ಳಿ. 

Comments (0 posted):

Post your comment comment

Please enter the code you see in the image:

  • email Email to a friend
  • print Print version
  • Plain text Plain text
Rate this article
0
Powered by SahilOnline.org