Home | ದ.ಕ.ಜಿಲ್ಲಾ ವಾರ್ತೆ | ಉಡುಪಿ | ಕುಂದಾಪುರ:ಹೊಸಂಗಡಿ ಸುಲಿಗೆ ಪ್ರಕರಣದ ಆರೋಪಿ ಸೆರೆ ಹಾಗೂ ಸ್ವತ್ತು ವಶ

ಕುಂದಾಪುರ:ಹೊಸಂಗಡಿ ಸುಲಿಗೆ ಪ್ರಕರಣದ ಆರೋಪಿ ಸೆರೆ ಹಾಗೂ ಸ್ವತ್ತು ವಶ

Font size: Decrease font Enlarge font
ಕುಂದಾಪುರ, ಫೆಬ್ರವರಿ ೨೧: ದಿನಾಂಕ ೦೬/೦೯/೨೦೦೬ ರಂದು ಕುಂದಾಪುರ ತಾಲೂಕು ಹೊಸಂಗಡಿ ಗ್ರಾಮದ ಕೆರೆಕಟ್ಟೆ ಎಂಬಲ್ಲಿನ ನಿವಾಸಿ ಶ್ರೀಮತಿ ಸುಧಾ ಗಾಣಿಗ ಇವರ ಮನೆಗೆ ಹಗಲು ಹೊತ್ತಿನಲ್ಲಿ ಇಬ್ಬರು ವ್ಯಕ್ತಿಗಳು ನೀರು ಕೇಳುವ ನೆಪದಲ್ಲಿ ಒಳ ಹೊಕ್ಕಿ, ಅವರ ಬಾಯಿಗೆ ಬಟ್ಟೆ ತುರುಕಿಸಿ, ರೂಮಿನಲ್ಲಿ ಕೂಡಿ ಹಾಕಿ, ಮನೆಯಲ್ಲಿದ್ದ ಸುಮಾರು ೨೩ ಪವನ್ ತೂಕದ ಚಿನ್ನಾಭರಣಗಳನ್ನು ದೋಚಿಕೊಂಡು ಹೋಗಿದ್ದು, ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
 
ಈ ಪ್ರಕರಣದ ಪ್ರಮುಖ ಆರೋಪಿ ದಾರವಾಡ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಶಿವಮೊಗ್ಗ ಜಿಲ್ಲೆ, ರಿಪ್ಪನ್‌ಪೇಟೆ ನಿವಾಸಿ ಶಿವ ಪ್ರಕಾಶ @ ಪ್ರಕಾಶ ಎಂಬವನನ್ನು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರ ಮಾರ್ಗದರ್ಶನದಲ್ಲಿ, ಕುಂದಾಪುರ ಪೊಲೀಸ್ ಉಪಾಧೀಕ್ಷಕರಾದ ಶ್ರೀ ವಿಶ್ವನಾಥ್ ರವರ ನೇತೃತ್ವದಲ್ಲಿ, ಕುಂದಾಪುರ ಪೊಲೀಸ್ ವೃತ್ತ ನಿರೀಕ್ಷಕರಾದ ಶ್ರೀ ಮದನ್ ಎ. ಗಾಂವ್‌ಕರ್ ರವರ ತಂಡ ನ್ಯಾಯಾಲಯದ ಆದೇಶ ಪಡೆದು ವಶಕ್ಕೆ ಪಡೆದುಕೊಂಡು ಆತನಿಂದ ರೂಪಾಯಿ ೧,೩೧,೦೦೦/- ಮೌಲ್ಯದ ಚಿನ್ನಾಭರಣಗಳನ್ನು ಸ್ವಾಧೀನಪಡಿಸಲಾಗಿದೆ. ಈ ಕಾರ್ಯಾಚರಣೆಯಲ್ಲಿ ಕುಂದಾಪುರ ಠಾಣಾ ಪಿ.ಎಸ್.ಐ. ಶ್ರೀ. ಸತೀಶ್ ಬಿ.ಎಸ್. ಎ.ಎಸ್.ಐ. ದೇವರಾಜ್ ಸಿಬ್ಬಂದಿಯವರಾದ ಪ್ರಕಾಶ, ಶೀನ ನಾಯ್ಕ್, ವೆಂಕಟ್ರಮಣ ದೇವಾಡಿಗ, ಸುಧಾಕರ, ವಿಜಯ ಕುಮಾರ್, ಗಣೇಶ ಬಳೆಗಾರ, ಮಹಾಬಲೇಶ್ವರ, ನಾರಾಯಣ ದೇವಾಡಿಗ, ಜಯಪ್ರಕಾಶ, ಜಯರಾಜ್, ಗೋಪಾಲಕೃಷ್ಣ, ರಾಜಾ ಗಣಪತಿ, ಪ್ರವೀಣ ಜಯಂತ ಶೆಟ್ಟಿ ಮತ್ತು ರಾಜು ಬೋವಿ ಇವರು ಭಾಗವಹಿಸಿರುತ್ತಾರೆ. ಈ ಪ್ರಕರಣದಲ್ಲಿ ಓರ್ವ ಆರೋಪಿಯನ್ನು ಈಗಾಗಲೇ ಬಂಧಿಸಿ ಆತನಿಂದ ಚಿನ್ನಾಭರಣಗಳನ್ನು ಸ್ವಾಧೀನಪಡಿಸಲಾಗಿತ್ತು. 

Comments (0 posted):

Post your comment comment

Please enter the code you see in the image:

  • email Email to a friend
  • print Print version
  • Plain text Plain text
Rate this article
0
Powered by SahilOnline.org