Home | ದ.ಕ.ಜಿಲ್ಲಾ ವಾರ್ತೆ | ಕಾರ್ಕಳ | ಕಾರ್ಕಳ: ಈದು ಕಂಬಳ ಫಲಿತಾಂಶ

ಕಾರ್ಕಳ: ಈದು ಕಂಬಳ ಫಲಿತಾಂಶ

Font size: Decrease font Enlarge font

ಕಾರ್ಕಳ, ಮಾರ್ಚ್ ೩: ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ಮತ್ತು ಸೂಪರ್ ಇಂಜಿನಿಯರಿಂಗ್ ಗ್ರೂಫ್ಸ್ (ಯು‌ಎ‌ಇ) ಹಾಗೂ ಜಯವಿಜಯ ಜೋಡುಕರೆ ಕಂಬಳ ಸಮಿತಿ ಈದು ಇದರ ಸಹಯೋಗದೊಂದಿಗೆ ಹದಿನಾಲ್ಕನೇ ವರ್ಷದ ಹೊನಲು ಬೆಳಕಿನ ಜಯ-ವಿಜಯ ಜೋಡುಕರೆ ಬಯಲು ಕಂಬಳ ಫಲಿತಾಂಶ.

ಹಗ್ಗ ಹಿರಿಯ: (ಪ್ರಥಮ) ಕೊಳಚ್ಚೂರು ಕೊಂಡೊಟ್ಟು ಸುಕುಮಾರ್ ಶೆಟ್ಟಿ, (ಓಡಿಸಿದವರು)ಮಾರ್ನಾಡು ರಾಜೇಶ್, (ದ್ವಿತೀಯ) ಸುಳ್ಯ ಕಾಂತಮಂಗಲ ಸಂದೀಪ್ ಕುಮಾರ್ (ಓ)ಕಡಂದಲೆ ಪ್ರಸಾದ್.

ಹಗ್ಗ ಕಿರಿಯ: (ಪ್ರ) ಮೂಡಬಿದ್ರೆ ಹೊಸಬೆಟ್ಟು ಚಂದ್ರಹಾಸ ಸಾಧು ಸನಿಲ್ (ಓ)ಮಾರ್ನಾಡು ರಾಜೇಶ್, (ದ್ವಿ) ಅತ್ತೂರು ಮನ್ನಥ ಜೆ.ಶೆಟ್ಟಿ (ಓ) ಅಳದಂಗಡಿ ಸತೀಶ್ ಕುಮಾರ್.

ಅಡ್ಡ ಹಲಗೆ: (ಪ್ರ) ಈದು ಮಕ್ಕಿಲ ಸನತ್ ಕುಮಾರ್ ಜೈನ್ (ಓ) ಮುಳಿಕಾರು ಕೇವುಡೇಲು ಅಣ್ಣಿ ದೇವಾಡಿಗ, (ದ್ವಿ) ಪೆರಿಂಜೆ ಮದಕ್ಕುಡೆ ಹರಿದಾಸ್ ಭಟ್ (ಓ) ಬಂಗಾಡಿ ಕುದ್ಮಾನು ಲೋಕಯ್ಯ ಗೌಡ.

ನೇಗಿಲು ಹಿರಿಯ: (ಪ್ರ) ಬಿ.ಸಿ.ರೋಡ್ ಕೈಕುಂಜೆ ಜೈಸನ್ ಡಿಕ್ರೂಜ್ (ಓ) ಮಾಳ ಕಲ್ಲೇರಿ ಭರತ್ ಶೆಟ್ಟಿ, (ದ್ವಿ) ಕಡಂದಲೆ ಹೊಗೆ ಮನೆ ಕೃಷ್ಣ ಶೆಟ್ಟಿ (ಓ) ಪಣಪಿಲ ಸಾಧು ಶೆಟ್ಟಿ.

ನೇಗಿಲು ಕಿರಿಯ: (ಪ್ರ) ಎಲ್ಲೂರು ಭಂಡಾರಿ ಮನೆ ಹರೀಶ್ ಶೆಟ್ಟಿ (ಓ) ಬಂಗಾಡಿ ಬಾಲಕೃಷ್ಣ, (ದ್ವಿ) ಕೆರ್ವಾಶೆ ಅರುಣ್ ಕುಮಾರ್ ಜೈನ್ (ಓ) ಈದು ಪಡ್ಡ್ಯಾರ ಮನೆ ಅಜಿತ್ ಕುಮಾರ್.

ಶ್ರೀ ಮಜಿಲ್ನಾಯ ದೈವಸ್ಥಾನದ ಬಾಕಿಮಾರು ಗದ್ದೆಯಲ್ಲಿ ನಡೆದ ಕಂಬಳದಲ್ಲಿ ೧೨೬ ಜತೆ ಕೋಣಗಳ ಭಾಗವಹಿಸಿದ್ದವು.

 

ಕಂಬಳದ ಉದ್ಘಾಟನೆಯನ್ನು ಉದ್ಯಮಿ ಮಹಮ್ಮದ್ ಗೌಸ್ ನೆರವೇರಿಸಿದರು. ತಾ.ಪಂ.ಅಧ್ಯಕ್ಷ ಉದಯ ಎಸ್.ಕೋಟ್ಯಾನ್, ವಸಂತ್ ಕುಮಾರ್, ವಿಜಯ ಕುಮಾರ್ ಶೆಟ್ಟಿ, ಈದು ಮಜಿಲ್ನಾಯ ದೇವಾಸ್ಥಾನದ ಆಡಳಿತ ಮೊಕ್ತೇಸರ ಜಯರಾಜ ಕಾಜವ, ಕಂಬಳ ಸಮಿತಿಯ ಅಧ್ಯಕ್ಷ ಪಾದೆ ಸನತ್ ಕುಮಾರ್ ಹೆಗ್ಡೆ, ಕಾರ್ಯದರ್ಶಿ ವಿಜಯಕುಮಾರ್, ಮಾಪಾಲು ಜಯವರ್ಮ ಜೈನ್, ಜಯರಾಮ ಪ್ರಭು ಕಡಾರಿ ಮತ್ತಿತರರು ಉಪಸ್ಥಿತರಿದ್ದರು.

 

ಸಭಾ ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್ ಅಧ್ಯಕ್ಷತೆಯಲ್ಲಿ ವಹಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಹಾಲು ಉತ್ಪಾದಕರ ಮಹಾ ಮಂಡಳಿಯ ಮಾಜಿ ಅಧ್ಯಕ್ಷರಾದ ಎಚ್.ಡಿ.ರೇವಣ್ಣ, ರಾಜ್ಯ ಸರಕಾರದ ದೆಹಲಿ ಪ್ರತಿನಿಧಿ ವಿ.ಧನಂಜಯ ಕುಮಾರ್, ಶಾಸಕರಾದ ಗೋಪಾಲ ಭಂಡಾರಿ, ಅಭಯಚಂದ್ರ ಜೈನ್, ಮಾಜಿ ಶಾಸಕ ವಿ.ಸುನಿಲ್ ಕುಮಾರ್, ರಾಜ್ಯ ಅಲ್ಪ ಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಮಹಮ್ಮದ್ ಮಸೂದ್, ಕೆ.ಎಮ್.ಇ.ಎಸ್.ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಕೆ.ಎಸ್.ಇಮ್ತಿಯಾಜ್ ಅಹ್ಮದ್, ಜಿ.ಪಂ.ಉಪಾಧ್ಯಕ್ಷ ಡಾ.ಸಂತೋಷ್ ಕುಮಾರ್ ಶೆಟ್ಟಿ, ಮಾಜಿ ಸಚಿವ ಅಮರನಾಥ ಶೆಟ್ಟಿ, ಡಾ.ಜೀವಂಧರ ಬಲ್ಲಾಳ್. ಉದ್ಯಮಿ ಪ್ರಮೋದ್ ಮಧ್ವರಾಜ್, ಯಶಪಾಲ್ ಸುವರ್ಣ, ಅಶೋಕ್ ಕೋಟ್ಯಾನ್, ಅಂತೋನಿ ಡಿ.ಸೋಜಾ ನಕ್ರೆ, ವೀಣಾ ವಾಸು ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

(ಚಿತ್ರ: ೩ಕಾರ್ಕಳ-ಕೆ.ಬಿ.ಎಲ್೧)ಈದುವಿನಲ್ಲಿ ನಡೆದ ಜಯ-ವಿಜಯ ಜೋಡುಕರೆ ಕಂಬಳದ ದೃಶ್ಯ......

Comments (0 posted):

Post your comment comment

Please enter the code you see in the image:

  • email Email to a friend
  • print Print version
  • Plain text Plain text
Rate this article
0
Powered by SahilOnline.org