ಮಂಜೇಶ್ವರ: ವ್ಯಾಪಾರಿ ಮೇಲೆ ಹಲ್ಲೆ
ಮಂಜೇಶ್ವರ ಮಾ.೦೪ ಗುರುವಾರ: ಮಂಜೇಶ್ವರ ಉದ್ಯಾವರ ಬಳಿ ವ್ಯಾಪಾರಿಯೋರ್ವನನ್ನು ತಂಡವೊಂದು ಹಲ್ಲೆಗೈದ ಘಟನೆ ಕಳೆದ ರಾತ್ರಿ ನಡೆದಿದೆ. ಹಲ್ಲೆಗೊಳಗಾದ ವ್ಯಾಪಾರಿಯನ್ನು ಮಂಜೇಶ್ವ ಕರೋಡಾ ನಿವಾಸಿ ಇಕ್ಬಾಲ್ ಬಿಳಿಯಾರ್ ಎಂದು ತಿಳಿದು ಬಂದಿದೆ. ಗಾಯಗೊಂಡ ಇಕ್ಬಾಲ್ ಕುಂಬಳೆ ಸಹಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ ರಾತ್ರಿ ಆಸಿಫ್, ರೈಹಾನ್, ಸಲೀಂ ಎಂಬುವರು ಹಲ್ಲೆ ನಡೆಸಿದ್ದಾರೆಂದು ಇಕ್ಬಾಲ್ ಮಂಜೇಶ್ವರ ಠಾಣೆಯಲ್ಲಿ ದೂರು ನೀಡಿದ್ದಾರೆ.
ಆರಿಫ್ ಮಚ್ಚಂಪಾಡಿ,ಮಂಜೇಶ್ವರ
Rate this article



del.icio.us
Digg
Comments (0 posted):
Post your comment