Home | ಉ.ಕ.ಜಿಲ್ಲಾ ವಾರ್ತೆ | ಯಲ್ಲಾಪುರ | ಭಟ್ಕಳ: ಅಕ್ರಮ ಸಾರಾಯಿ ಸಾಗಾಟ - ಓರ್ವನ ಬಂಧನ

ಭಟ್ಕಳ: ಅಕ್ರಮ ಸಾರಾಯಿ ಸಾಗಾಟ - ಓರ್ವನ ಬಂಧನ

Font size: Decrease font Enlarge font

ಭಟ್ಕಳ, ಮಾರ್ಚ್ 10:ಅಕ್ರಮವಾಗಿ ಸಾರಾಯಿ ತೊಟ್ಟೆಗಳನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿಯೋರ್ವನನ್ನು ಅಬಕಾರಿ ಅಧಿಕಾರಿಗಳು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

ಬಂಧಿತನನ್ನು ಶಿರಾಲಿಯ ಸೀತಾರಾಮ ನಾಯ್ಕ ಎಂದು ಹೇಳಲಾಗಿದೆ. ಈತ ನಿನ್ನೆ ಸಂಜೆ ತನ್ನ ಅಂಗಡಿಯಲ್ಲಿ ಅಕ್ರಮವಾಗಿ ಗೋವಾದ ೬೨ ಹನಿಗೈಡ್ ತೊಟ್ಟೆ ಸಾರಾಯಿಯನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿದ್ದ ಸಂದರ್ಭದಲ್ಲಿ ಖಚಿತ ಮಾಹಿತಿಯ ಮೇರೆಗೆ ಅಬಕಾರಿ ನಿರೀಕ್ಷಕಿ ಗೀತಾ ಪಿ ನೇತೃತ್ವದಲ್ಲಿ ಸಿಬ್ಬಂದಿಗಳಾದ ಮಂಜುನಾಥ ನಾಯ್ಕ ಮುಂತಾದವರು ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಮದ್ಯದ ಮೌಲ್ಯ ೯೦೦ ರೂ ಎಂದು ಅಂದಾಜಿಲಾಗಿದೆ.

Comments (0 posted):

Post your comment comment

Please enter the code you see in the image:

  • email Email to a friend
  • print Print version
  • Plain text Plain text
Rate this article
0
Powered by SahilOnline.org