ಅಂಕೋಲ ಬಳಿ ಭೀಕರ ಅಪಘಾತ - ಉಪ್ಪುಂದದ ನಾಲ್ವರ ಸಾವು
ಅಂಕೋಲ, ಫೆಬ್ರವರಿ ೧೨, ಅಂಕೋ ರಾ.ಹೆ.೬೩ ರ ಸಂಕಸಾರ ಎಂಬಲ್ಲಿ ಮದ್ಯಾಹ್ನ ಮೂರು ಗಂಟೆಗೆ ಅದಿರು ಲಾರಿ ಮತ್ತು ಕಾರ್ ನಡುವೆ ನಡೆದ ಭೀಕರ ರಸ್ತೆ ಅಫಘಾತದಲ್ಲಿ ಕುಂದಾಪುರ ತಾಲೂಕಿನ ಉಪ್ಪುಂದದ ನಾಲ್ವರು ಸಾವಿಗೀಡಾದ ಘಟನೆ ಜರುಗಿದೆ.

ಮೃತರನ್ನು ಉಪ್ಪುಂದದ ನಿವಾಸಿಗಳಾದ ರಿತೀಶ ಭೋಜಯ್ಯ ಶೆಟ್ಟಿ(೮) ಈಕೆಯ ತಾಯಿ ಸುಲಕ್ಷಣ ಭೋಜಯ್ಯ ಶೆಟ್ಟಿ(೩೨) ಸುಜಾತ ಬಾಳಕೃಷ್ಣ (೩೯) ಹಾಗೊ ಕಾರು ಚಾಲಕ ನಾಗೇಶ ಬಡಿಗೇರ್(೩೫) ಎಂದು ಗುರುತಿಸಲಾಗಿದೆ.
ಇವರು ಧಾರಡವಾದಲ್ಲಿ ನಡೆಯುವ ಶಿವರಾತ್ರಿ ಯ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಇಂದು ಬೆಳಗ್ಗೆ ಉಪ್ಪುಂದದಿಂದ ಧಾರವಾಡಕ್ಕೆ ಹೋಗುತ್ತಿದ್ದರು ಎನ್ನಲಾಗಿದ್ದು ಈ ಸಂದರ್ಭದಲ್ಲಿ ಅಂಕೋಲದ ಸಂಕಸಾರ ಎಂಬಲ್ಲಿ ಎದುರಿನಿಂದ ಬಂದ ಅದಿರು ಲಾರಿಯು ಡಿಕ್ಕಿ ಹೊಡೆದು ಈ ಅಪಘಾತ ಜರುಗಿದೆ ಎನ್ನಲಗಿದೆ.
Rate this article



del.icio.us
Digg
Comments (0 posted):
Post your comment