ಕಾರವಾರ: ದೇಶದ ಮಹತ್ವಾಕಾ೦ಕ್ಷೆಯ ‘ಕದ೦ಬ’ ನೌಕಾನೆಲೆ ಸಂತ್ರಸ್ತರ ತಪ್ಪದ ಗೋಳು
ಕಾರವಾರ: ಕಡಲಂಚಿನಲ್ಲಿ ಮೀನುಗಾರಿಕೆಯನ್ನೇ ನಂಬಿಕೊಂಡಿದ್ದ ಈ ಮೀನುಗಾರರು ಉದ್ಯೋ ಗ ನಡೆಸಲು ಮೀನುಗಾರಿಕಾ ಬಂದರು ಹಾಗೂ ಯಾಂತ್ರೀಕೃತ ದೋಣಿಗಳನ್ನು ನಿರ್ಮಿಸಿಕೊಡ ಬೇಕು ಎನ್ನುವ ಮನವಿಯನ್ನು ಕೇಂದ್ರದ ಉನ್ನತ ಸಮಿತಿಯ ಮುಂದಿಟ್ಟಿದ್ದರು. ಈ ಬೇಡಿಕೆಯನ್ನು ಮನ್ನಿಸಿದ ಉನ್ನತ ಸಮಿತಿ ತಾಲ್ಲೂಕಿನ ಮುದಾಗದಲ್ಲಿ ಮೀನುಗಾರಿಕಾ ಬಂದರು ಮಾಡಲು ಒಪ್ಪಿಗೆ ಸೂಚಿಸಿತು.
ಮೀನುಗಾರಿಕಾ ಬಂದರು ನಿರ್ಮಾಣಕ್ಕೆ ಸಂಬಂಧಪಟ್ಟಂತೆ ರಾಜ್ಯ ಮಟ್ಟದ ಸಮಿತಿಯೊಂದನ್ನು ರಚಿಸಲಾಯಿತು. ಬಂದರು ನಿರ್ಮಾಣದ ಜವಾಬ್ದಾರಿಯನ್ನು ಸಿಐಎಂಎಫ್‌ಎಚ್ (ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಮರೈನ್ ಫಿಶರೀಸ್ ಹಾರ್ಬರ್)ಗೆ ವಹಿಸಿಕೊಡಲಾಯಿತು.
ಆಶ್ವರ್ಯವೆಂದರೆ ಸಿಐಎಂಎಫ್‌ಎಚ್‌ನಿಂದ ಬಂದರು ನಿರ್ಮಾಣಕ್ಕೆ ಸಂಬಂಧಪಟ್ಟಂತೆ ನೀಲನಕ್ಷೆ ಮಾತ್ರ ಪಡೆದು ನಿರ್ಮಾಣ ಜವಾಬ್ದಾರಿಯನ್ನು ರಾಜ್ಯ ಮಟ್ಟದ ಸಮಿತಿ ಏಜೆನ್ಸಿಯೊಂದಕ್ಕೆ ನೀಡಿತು.
ಎಂಟು ಕೋಟಿ ರೂಪಾಯಿ ವೆಚ್ಚದಲ್ಲಿ ಬಂದರು ನಿರ್ಮಾಣ ಕಾಮಗಾರಿ ಆರಂಭವಾಯಿತು. ಬಂದರಿನ ಎರಡೂ ಬದಿಯಲ್ಲಿ ಬ್ರೆಕ್‌ವಾಟರ್ ಹಾಕಬೇಕು. ಬೋಟ್‌ಗಳು ಲಂಗರು ಹಾಕಲು ಐದು ಮೀಟರ್ ಆಳ ಹೂಳೆತ್ತಬೇಕು ಎಂದು ಆರಂಭದಲ್ಲೇ ಮೀನುಗಾರರು ರಾಜ್ಯ ಸಮಿತಿಗೆ ತಿಳಿಸಿದ್ದ ರು. ಆದರೆ, ಮೀನುಗಾರರ ಬೇಡಿಕೆಗಳನ್ನು ಕಡೆಗಣಿಸಿ ಕಾಟಾಚಾರಕ್ಕೆ ಎನ್ನುವಂತೆ ಕಾಮಗಾರಿ ಮುಗಿಸಲಾಗಿದೆ.
ಬಾರ್ಜ್ ಮೇಲೆ ಜೆಸಿಬಿ ಯಂತ್ರಗಳನ್ನಿಟ್ಟು ಹೂಳೆತ್ತಲಾಗಿದೆ.ಮನಸ್ಸಿಗೆ ಬಂದಂತೆ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಐಸ್‌ಪ್ಲಾಂಟ್‌ಗೆ ಕಟ್ಟಡ ಮಾತ್ರ ಇದೆ ಆದರೆ ಸಲಕರಣೆಗಳಿಲ್ಲ. ವಿದ್ಯುತ್ ಸಂಪ ರ್ಕ ಇಲ್ಲವೇ ಇಲ್ಲ. ನೀರು ಪೂರೈಕೆ ಆಗುತ್ತಿಲ್ಲ. ನಿರ್ಮಾಣ ಹಂತದಲ್ಲೇ ಕಟ್ಟಡಕ್ಕೆ ಅಳವಡಿಸಿದ್ದ ಸಿಮೆಂಟ್ ಸೀಟುಗಳು ಹಾರಿ ಹೋಗಿವೆ. ಅಳಿವೆ (ಸಮುದ್ರ, ನದಿ ಸಂಗಮ ಪ್ರದೇಶ)ಯಲ್ಲಿ ಹೂಳು ತುಂಬಿದ್ದರಿಂದ ಬೋಟ್ಗಳು ಹೊರಗೆ ಹೋಗಲು, ಒಳಗೆ ಬರಲು ಸಾಧ್ಯವಾಗುತ್ತಿಲ್ಲ. ಇಡೀ ಬಂದರು ಹೂಳಿನಿಂದ ತುಂಬಿ ಹೋಗಿದೆ. ರಸ್ತೆಗಳು ಸಂಪೂರ್ಣ ಹದಗೆಟ್ಟಿವೆ.
ಬಂದರಿನ ಕಾಮಗಾರಿ ಅಪೂರ್ಣ ಆಗಿದ್ದರಿಂದ ಮೀನುಗಾರಿಕಾ ಬೋಟ್ಗಳು, ವ್ಯಾಪಾರಸ್ಥರು ಯಾರೂ ಇಲ್ಲಿಗೆ ಬರದೇ ಇರುವುದರಿಂದ ನಿರಾಶ್ರಿತರು ಹಸಿದ ಹೊಟ್ಟೆಗೆ ತಣ್ಣೀರಬಟ್ಟೆ ಕಟ್ಟಿಕೊಳ್ಳ ಬೇಕಾಗಿದೆ. ಕಾಮಗಾರಿ ಮುಗಿದ ನಂತರ ಬಂದರು ಮೀನುಗಾರಿಕಾ ಇಲಾಖೆಗೆ ಹಸ್ತಾಂತರ ಗೊಳ್ಳಬೇಕಿತ್ತು. ಆದರೆ, ಕಳಪೆ ಕಾಮಗಾರಿ ಹಾಗೂ ಬಂದರಿನಲ್ಲಿ ಹೂಳು ತುಂಬಿದ್ದರಿಂದ ಮೀನು ಗಾರಿಕಾ ಇಲಾಖೆ ಬಂದರಿನ ಸ್ವಾಧೀನತೆ ಪಡೆಯಲು ಹಿಂದೇಟು ಹಾಕುತ್ತಿದೆ.
ಕಾಮಗಾರಿ ನಡೆಯುವ ಹಂತದಲ್ಲೇ ಮೀನುಗಾರರು ಆಕ್ಷೇಪ ಎತ್ತಿದ್ದರು. ಬಂದರಿನ ಕಾಮಗಾರಿ ಕಳಪೆ ಆಗಿದೆ. ಗುತ್ತಿಗೆದಾರರಿಗೆ ಹಣ ಪಾವತಿ ಮಾಡಬಾರದು ಎಂದು ಮನವಿ ಮಾಡಿಕೊಂಡಿ ದ್ದರು. ಆದರೆ, ಅಧಿಕಾರಿಗಳ ಕಣ್ಣಿಗೂ ಮಣ್ಣೆರೆಚಿದ ಗುತ್ತಿಗೆದಾರರು ಕಾಮಗಾರಿಯ ಸಂಪೂರ್ಣ ಹಣ ಪಡೆದುಕೊಂಡಿದ್ದಾರೆ.
“ಮುದಾಗ ಸಮುದ್ರದಲ್ಲಿ ಕೆಸರು ತುಂಬ ಇರುವುದರಿಂದ ಸಾಂಪ್ರದಾಯಿಕ ಮೀನುಗಾರಿಕೆ ಮಾಡಲು ಅವಕಾಶವಿಲ್ಲ. ಯಾಂತ್ರೀಕೃತ ಮೀನುಗಾರಿಕೆ ಮಾಡಲೇಬೇಕು. ಬಂದರಿನ ಕಾಮಗಾರಿ ಕಳಪೆ ಆಗಿದ್ದರಿಂದ ಮೀನುಗಾರಿಕಾ ಚಟುವಟಿಕೆಗಳು ಇನ್ನೂ ಪ್ರಾರಂಭವಾಗದೆ ಇರುವುದರಿಂದ ನಿರಾಶ್ರಿತರು ಉದ್ಯೋಗವಿಲ್ಲದೆ ಅಲೆದಾಡುವಂತಾಗಿದೆ’ ಎನ್ನುತ್ತಾರೆ ಮೀನುಗಾರರ ಮುಖಂಡ ಪಿ.ಎಂ.ತಾಂಡೇಲ.
ಸೌಜನ್ಯ: ನಾಗೇಂದ್ರ ಖಾರ್ವಿ



del.icio.us
Digg
Comments (0 posted):
Post your comment