Home | ಉ.ಕ.ಜಿಲ್ಲಾ ವಾರ್ತೆ | ಹಳಿಯಾಳ | ಭಟ್ಕಳ: ಅಪಘಾತಕ್ಕೀಡಾದ ವೃದ್ಧರ ಸಾವು - ದೂರು ದಾಖಲು

ಭಟ್ಕಳ: ಅಪಘಾತಕ್ಕೀಡಾದ ವೃದ್ಧರ ಸಾವು - ದೂರು ದಾಖಲು

Font size: Decrease font Enlarge font

ಭಟ್ಕಳ, ಮಾರ್ಚ್ 10: ತಾಲೂಕಿನ ಬೇಂಗ್ರೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ ಡಿಕ್ಕಿಯಿಂದಾಗಿ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯುತ್ತಿದ್ದ ವೃದ್ಧ ಮೃತಪಟ್ಟ ಘಟನೆ ನಿನ್ನೆ ಬೆಳಿಗ್ಗೆ ನಡೆದಿದೆ.

 

ಮೃತರನ್ನು ಬೇಂಗ್ರೆಯ ಚೆನ್ನಯ್ಯ ದೇವಾಡಿಗ(65) ಎಂದು ಗುರುತಿಸಲಾಗಿದೆ. ಈತ ಸೋಮವಾರ ಸಂಜೆ ಬೇಂಗ್ರೆ ಯಕ್ಷೆಮನೆ ಕ್ರಾಸ ಬಳಿ ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ ಶಿರಾಲಿಯಿಂದ ಮುರ್ಡೇಶ್ವರದ ಕಡೆಗೆ ತೆರಳುತ್ತಿದ್ದ ಬೈಕೊಂದು ಡಿಕ್ಕಿ ಹೊಡೆದಿತ್ತು. ಡಿಕ್ಕಿಯ ರಭಸಕ್ಕೆ ರಸ್ತೆಯ ಮೇಲೆ ಬಿದ್ದು ಗಂಭೀರ ಗಾಯಗೊಂಡಿದ್ದ ವೃದ್ದನನ್ನು ಅಂದು ತಕ್ಷಣ ಭಟ್ಕಳದ ಸರಕಾರಿ ಆಸ್ಪತ್ರೆಗೆ ಒಯ್ದು ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಕುಂದಾಪುರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆತ ಗಂಭೀರ ಗಾಯಗೊಂಡ ಹಿನ್ನೆಲೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಬೆಳಗಿನ ಜಾವ ಕೊನೆಯುಸಿರೆಳೆದಿದ್ದಾನೆ.

 

ಮೊನ್ನೆ ಬೈಕು ವೃದ್ದನಿಗೆ ಡಿಕ್ಕಿ ಹೊಡೆದಿದ್ದಲ್ಲದೇ ಎದುರಿನಿಂದ ಬರುತ್ತಿದ್ದ ಪ್ಯಾಸೆಂಜರ್ ರಿಕ್ಷಾಕ್ಕೂ ಗುದ್ದಿದ್ದು, ಅದರದಲ್ಲಿದ್ದ ಪ್ರಯಾಣಿಕರು, ಚಾಲಕ ಹಾಗೂ ಬೈಕ್ ಸವಾರರಿಬ್ಬರೂ ಸೇರಿದಂತೆ ಒಟ್ಟೂ ಆರು ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದನ್ನು ಇಲ್ಲಿ ಸ್ಮರಿಸಬಹುದು. ವೃದ್ದನ ಸಾವಿನ ಬಗ್ಗೆ ಮುರ್ಡೇಶ್ವರ ಠಾಣೆಯಲ್ಲಿ ದೂರು ದಾಖಲಾಗಿದೆ.

 

Comments (0 posted):

Post your comment comment

Please enter the code you see in the image:

  • email Email to a friend
  • print Print version
  • Plain text Plain text
Rate this article
0
Powered by SahilOnline.org