Home | ಉ.ಕ.ಜಿಲ್ಲಾ ವಾರ್ತೆ | ಹಳಿಯಾಳ | ಭಟ್ಕಳ: ಮುರ್ಡೇಶ್ವರದ ವಿದ್ಯಾರ್ಥಿಗಳಿಗೆ ಒದಗಿಬಂದಿರುವ ಅವಕಾಶ - ಇಂಗ್ಲಿಷ್ ಸ್ಪೀಕಿಂಗ್ ಕೋರ್ಸ್

ಭಟ್ಕಳ: ಮುರ್ಡೇಶ್ವರದ ವಿದ್ಯಾರ್ಥಿಗಳಿಗೆ ಒದಗಿಬಂದಿರುವ ಅವಕಾಶ - ಇಂಗ್ಲಿಷ್ ಸ್ಪೀಕಿಂಗ್ ಕೋರ್ಸ್

Font size: Decrease font Enlarge font

ಭಟ್ಕಳ, ಮಾರ್ಚ್ 4;ಮುರ್ಡೇಶ್ವರದ ಗ್ರಾಮೀಣ ಶಿಕ್ಷಣ ಪ್ರತಿಷ್ಟಾನದ ವತಿಯಿಂದ ತಾಲೂಕಿನ ಪಿ.ಯು.ಸಿ. ಡಿಗ್ರಿ, ಡಿಪ್ಲೋಮಾ, ಡಿ.ಇಡಿ, ಎಸ್.ಎಸ್.ಎಲ್.ಸಿ. ಮತ್ತು ನರ್ಸಿಂಗ್ ಇನ್ನಿತರ ತರಬೇತಿ ಕೋರ್ಸುಗಳಲ್ಲಿ ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಇಂಗ್ಲೀಷ್‌ನಲ್ಲಿ ಓದಲು, ಬರೆಯಲು, ಚುರುಕಾಗಿ ಮಾತನಾಡಲು ಅರ್ಜಿ ಪತ್ರ ವ್ಯವಹಾರ ಹಾಗೂ ಬರವಣಿಗೆಯ ವ್ಯವಹಾರಗಳನ್ನು ಸುಲಭ ಶೈಲಿಯಲ್ಲಿ ಬರೆಯುವುದನ್ನು ಕಲಿಸಲು ಇಂಗ್ಲೀಷ್ ಸ್ಪೀಕಿಂಗ್ ಕೋರ್ಸ್ ತರಬೇತಿಯನ್ನು ಮುರ್ಡೇಶ್ವರದ ಗೀತಾ ಶ್ರೀ ಸಿದ್ಧಿವಿನಾಯಕ ಕೃಪಾ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.

 

ತರಬೇತಿಯು ೨೦೦೯ರ ಜೂನ್ ೧ ರಂದು ಪ್ರಾರಂಭವಾಗಿದ್ದು, ತರಬೇತಿಯ ಕಾಲಾವಧಿ ೬ ತಿಂಗಳದ್ದಾಗಿದೆ. ದ್ವಿತೀಯ ಹಾಗೂ ತೃತೀಯ ವರ್ಗಗಳು ಈಗಾಗಲೇ ಕಲಿಕೆಯ ಹಂತದಲ್ಲಿದ್ದು, ಇಂಗ್ಲೀಷ್‌ನ ಮೇಲೆ ಪ್ರಭುತ್ವ ಸಾಧಿಸಿವೆ. ತರಬೇತಿಯ ಮೂರನೇ ವರ್ಗವನ್ನು ೨೦೧೦ರ ಎಪ್ರಿಲ್ ೧೪ ರಂದು ಪ್ರಾರಂಭಿಸಲು ನಿರ್ಧರಿಸಲಾಗಿದ್ದು, ತರಗತಿಯಲ್ಲಿ ಪ್ರವೇಶ ಪಡೆಯಲು ಇಚ್ಚಿಸುವ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಮಾರ್ಚ್ ೨೯ರ ಒಳಗಾಗಿ ಕಚೇರಿಯಲ್ಲಿ ಅರ್ಜಿ ಸಲ್ಲಿಸಬೇಕು. ಹಾಗೂ ಮಾರ್ಚ್ ೩೦ ರಂದು ಸಂದರ್ಶನದ ಮೂಲಕ ಆಯ್ಕೆ ಮಾಡಿ ಪ್ರವೇಶ ನೀಡಲಾಗುವುದು ಎಂದು ಪ್ರತಿಷ್ಟಾನದ ಅಧ್ಯಕ್ಷ ಎಸ್.ಎಸ್.ಕಾಮತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments (0 posted):

Post your comment comment

Please enter the code you see in the image:

  • email Email to a friend
  • print Print version
  • Plain text Plain text
Rate this article
0
Powered by SahilOnline.org