ಭಟ್ಕಳ:ಓಸಿ ಆಡಿಸುತ್ತಿದ್ದವನ ಬಂಧಿಸಿ ಬಿಡುಗಡೆ
ಭಟ್ಕಳ, ಜನವರಿ 21:ಓಸಿ ಆಡಿಸುತ್ತಿದ್ದ ವ್ಯಕ್ತಿಯೋರ್ವನನ್ನು ಮುರ್ಡೇಶ್ವರ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡ ಘಟನೆ ನಿನ್ನೆ ರಾತ್ರಿ ನಡೆದಿದೆ. ಮುರ್ಡೇಶ್ವರದ ವೆಂಕಟೇಶ ತಂದೆ ಜಟ್ಟಪ್ಪ ನಾಯ್ಕ ಎಂಬಾತನೇ ಬಂಧಿತ ವ್ಯಕ್ತಿಯಾಗಿದ್ದಾನೆ.
ಈತ ನಿನ್ನೆ ರಾತ್ರಿ ಮುರ್ಡೇಶ್ವರ ಮಠದ ಹಿತ್ಲುವಿಗೆ ತೆರಳುವ ದಾರಿಯಲ್ಲಿ ಓಸಿ ಬರೆಯುತ್ತಿದ್ದ ಸಂದರ್ಭದಲ್ಲಿ ಎಸೈ ಸುಂದರೇಶ ದಾಳಿ ನಡೆಸಿ ಆತನಿಂದ ೪೫೦ ರೂ ನಗದು ಹಣ ವಶಪಡಿಸಿಕೊಂಡಿದ್ದಾರೆ. ಬಂಧಿತನನ್ನು ನಿನ್ನೆ ರಾತ್ರಿಯೇ ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ.
Rate this article



del.icio.us
Digg
Comments (0 posted):
Post your comment