ಮುರ್ಡೇಶ್ವರ: ಜಾತ್ರೆಯಲ್ಲಿ ಸಿಹಿ ಪಾನಕ ಹಂಚಿದ ಗಣೇಶಭವನ-ಲಯನ್ಸ್ ಕ್ಲಬ್
ಮುರ್ಡೇಶ್ವರ, ಜನವರಿ 19: ಜಾತ್ರೆಯ ಪ್ರಯುಕ್ತ ನೆರಿದಿದ್ದ ಜನತೆ ಬಿರುಬಿಸಿಲಿನಲ್ಲಿ ಬಳಲಿದ್ದಾಗ ಮುರ್ಡೇಶ್ವರದ ಶ್ರೀ ಗಣೇಶ ಭವನ ಹಾಗೂ ಲಯನ್ಸ್ ಕ್ಲಬ್ ಸಂಯುಕ್ತವಾಗಿ ವಿತರಿಸಿದ ತಣ್ಣನೆಯ ಪಾನಕ ವರದಾನದಂತೆ ಕಂಡುಬಂದಿತ್ತು.
ಲಯನ್ಸ್ ಕ್ಲಬ್ ಸದಸ್ಯರು ತಂಪಾದ ಲಿಂಬೆ ಪಾನಕ ವಿತರಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಆಯಾಸ ಪರಿಹರಿಸುವಲ್ಲಿ ನೆರವಾದರು. ಪಾನಕ ಸ್ವೀಕರಿಸಿದ ಭಕ್ತರು ಒಳ್ಳೆಯದಾಗಲಿ ಎಂದು ಹರಸಿದರು.
Rate this article



del.icio.us
Digg
Comments (0 posted):
Post your comment