ಭಟ್ಕಳ: ಕುಕನೀರಿನಲ್ಲಿ ವಿಷಸೇವಿಸಿ ವ್ಯಕ್ತಿ ಆತ್ಮಹತ್ಯೆ
ಭಟ್ಕಳ, ಫೆಬ್ರವರಿ ೧೩, ಭಟ್ಕಳ ತಾಲೂಕಿನ ಹೆಬಳೆ ಗ್ರಾಮಪಂಚಾಯತ್ ವ್ಯಾಪ್ತಿಯ ಕುಕನೀರ್ ಎಂಬಲ್ಲಿ ವ್ಯಕ್ತಿಯೊಬ್ಬ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಸುಕ್ರವಾರ ರಾತ್ರಿ ಜರುಗಿದ್ದು ಮೃತರನ್ನು ರಾಜು ನಾಗಪ್ಪ ನಾಯ್ಕ(೨೮) ಎಂದು ಗುರುತಿಸಲಾಗಿದೆ. ರಾತ್ರಿಯೆ ವಿಷವನ್ನು ಸೇವಿಸಿದ್ದು ಅವರನ್ನು ತಕ್ಷಣವೆ ಭಟ್ಕಳ ಸರಕಾರಿ ಆಸ್ಪತ್ರೆಗೆ ತಂದು ಚಿಕಿತ್ಸೆಯನ್ನು ನೀಡಿ ಕುಂದಾಪುರಕ್ಕೆ ತೆಗೆದುಕೊಂಡು ಹೋಗುವಾಗ ಮಾರ್ಗದಲ್ಲಿಯೆ ಸಾವನ್ನಪ್ಪಿದ್ದರೆ ಎಂದು ತಿಳಿದುಬಂದಿದೆ.
Rate this article



del.icio.us
Digg
Comments (0 posted):
Post your comment