Home | ಅಂತಾರಾಷ್ಟ್ರೀಯ ವಾರ್ತೆ | ದುಬೈ: ಭಾರತಕ್ಕೆ ವರವಾಗಲಿದೆ ಸೌದಿ ವೀಸಾ ನೀತಿ

ದುಬೈ: ಭಾರತಕ್ಕೆ ವರವಾಗಲಿದೆ ಸೌದಿ ವೀಸಾ ನೀತಿ

Font size: Decrease font Enlarge font

ದುಬೈ, ಡಿ. ೨೭: ಕಾರ್ಮಿಕರ ಕುಟುಂಬಗಳಿಗೆ ಅವರ ವೃತ್ತಿಯ ಬದಲಿಗೆ ಆರ್ಥಿಕ ಸ್ಥಾನಮಾನ ಆಧರಿಸಿ ಶಾಶ್ವತ ವಾಸ್ತವ್ಯ ವೀಸಾಗಳನ್ನು ನೀಡಲು ಸೌದಿ ಅರೇಬಿಯಾ ಸರಕಾರ ನಿರ್ಧರಿಸಿದ್ದು, ಗಡಿಪಾರು ಬೆದರಿಕೆ ಎದುರಿಸುತ್ತಿರುವ ಭಾರತೀಯರು ಸೇರಿದಂತೆ ಇತರರಿಗೆ ಇದು ವರವಾಗಿ ಪರಿಣಮಿಸಿದೆ.

ಈ ಹಿಂದೆ ಎಂಜಿನಿಯರ್, ಡಾಕ್ಟರ್ ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳು ಸೇರಿದಂತೆ ಬಿಳಿ ಕಾಲರ್‌ನ ಉದ್ಯೋಗಿಗಳಿಗೆ ಮಾತ್ರ ಶಾಶ್ವತ ವಸತಿ ಹಾಗೂ ಪ್ರವಾಸ ವೀಸಾಗಳನ್ನು ನೀಡ ಲಾಗುತ್ತಿತ್ತು. ಪ್ರಸ್ತುತ ಆರ್ಥಿಕವಾಗಿ ಸಬಲರಾಗಿರುವ ಎಲ್ಲರಿಗೂ ಈ ವೀಸಾವನ್ನು ನೀಡಲು ಸರ ಕಾರ ನಿರ್ಧರಿಸಿದೆ ಎಂದು ಸೌದಿ ವಿದೇಶ ಸಚಿವಾಲಯ ಹೇಳಿದೆ.

ರಿಯಾದ್‌ನಲ್ಲಿನ ಸಚಿವಾಲಯದ ಕಚೇರಿಯು ಕಳೆದ ವಾರ ಮೂರು ದಿನಗಳ ಕಾಲ ಈ ವೀಸಾ ವಿತರಿಸಿ ಬಳಿಕ ಸ್ಥಗಿತಗೊಳಿಸಿತ್ತು. ಮುಂದಿನ ತಿಂಗಳಲ್ಲಿ ಈ ಸೇವೆ ಮತ್ತೆ ಆರಂಭಗೊಳ್ಳುವ ನಿರೀ ಕ್ಷೆಯಿದೆ ಎಂದು ಸಚಿವಾಲಯದ ಅಧಿಕಾರಿಗಳು ಹೇಳಿದ್ದಾರೆ.

 

ಸೌಜನ್ಯ: ಉದಯವಾಣಿ 

Comments (0 posted):

Post your comment comment

Please enter the code you see in the image:

  • email Email to a friend
  • print Print version
  • Plain text Plain text
Rate this article
0
Powered by SahilOnline.org